ಭಾನುವಾರ, ಏಪ್ರಿಲ್ 5, 2020

ಕರೋನ ದಿನಗಳು ..

ಎಂಬತ್ತರ ದಶಕದಲ್ಲಿ ಹುಟ್ಟಿದವನು ನಾನು, ನನ್ನ ಬಾಲ್ಯದ ದಿನಗಳಲ್ಲಿ ಪ್ರತಿಯೊಂದು ಹೊಸ ಆವಿಷ್ಕಾರಗಳನ್ನು ,ಬದಲಾವಣೆಗಳನ್ನು ಕಂಡಾಗ ಅತೀವ ಸಂತಸ ಪಡುತ್ತಿದ್ದೆ. ನನಗೆ ತುಂಬಾ ಪರಿಣಾಮಕಾರಿಗಳೆನಿಸಿದ್ದು, ದೂರಸಂಪರ್ಕ ಮತ್ತು ಹೆದ್ದಾರಿಗಳು . ಇಂದು ಉಪಯೋಗಿಸುವ ಆಧುನಿಕ ಇಲೆಕ್ಟ್ರಾನಿಕ್ ಉಪಕರಣಗಳ ಕಲ್ಪನೆಯನ್ನು ನಾನು ನಮ್ಮ ಅಂಗಡಿಯ ಮುಂದೆ ಕಾಣುತ್ತಿದ್ದೆ . ಇಂದಿಗೂ ಕಾರ್ಯನಿರತವಾಗಿರೋ ಹ್ಯಾಮ್ ರೇಡಿಯೋ ಬಗ್ಗೆ ಲೇಖನವೊಂದು ೯೪ ರಲ್ಲಿ ಪ್ರಕಟವಾಗಿತ್ತು ಅದಕ್ಕೆ ಪ್ರವೇಶ ಪಡೆವಯಲು ೫೦೦ ರೂಪಾಯಿ ಶುಲ್ಕವಿತ್ತು ಅಪ್ಪನ ಹತ್ತಿರ ಹಣವಿಲ್ಲದ್ದಕ್ಕೆ ಬೇಸರವಾಗಿ ಅಂದಿನ ಪ್ರಧಾನಿ ಶ್ರೀ ಪಿ ವಿ ನರಸಿಂಹರಾಯರಿಗೆ ಪತ್ರ ಬರೆದಿದ್ದೆ , ಆದರೆ ದುರದೃಷ್ಟವಶಾತ್ ವಿಳಾಸ ತಪ್ಪಾಗಿತ್ತು .
                           
                  ಸುಮಾರು ೧೯೯೨ರ ಸಮಯ ಬೆಂಗಳೂರಿನಲ್ಲಿ ಅತ್ತೆಯ ಮನೆ ಗೃಹ ಪ್ರವೇಶ , ಅಪ್ಪ ಹಾವೇರಿಯಲ್ಲಿ ಇದ್ದರು , ಅಮ್ಮ ದೊಡ್ಡಮ್ಮ ದೊಡ್ಡಪ್ಪ ಜೊತೆ ಹೋಗಲು ನಿರ್ಧರಿಸಿದ್ದರು,ಬಡತನದಲ್ಲಿ ಕಾಲ ಕಳೆಯುತ್ತಿದ್ದ ಸಮಯವದು , ಏನೂ ತೋಚದೆ ಅಮ್ಮ ಅಕ್ಕ ಪಕ್ಕದಲ್ಲಿ ಕೈ   ಸಾಲ ಮಾಡಿ ಹೊರಟಿದ್ದರು . ಬೆಂಗಳೂರು ಎಂಬ ಶಬ್ದ ಕೇಳಿದೊಡನೆಯೇ ಮೈ ರೋಮಾಂಚನ ಆಗಿತ್ತು , ಅಮ್ಮನಿಗೆ ಕಾಡಿ ಬೇಡಿ ಮತ್ತೆ ಸಾಲ ಮಾಡಿಸಿದ್ದೆ ,ರಾಣಿಬೆನ್ನೂರಿನಿಂದ ಬೆಂಗಳೂರಿಗೆ ಆಗ ೫೦ ರೂಪಾಯಿ ಬಸ್ ದರ , ನನಗೆ ಅರ್ಧ ದರ ೨೫ ರೂಪಾಯಿ , ಆಗ ರೈಲುಗಳಲ್ಲಿ ಬೆಂಗಳೂರಿಗೆ ಹೋಗವು ಅಭ್ಯಾಸ ನಮ್ಮೂರಲ್ಲಿ ಸಾಕಷ್ಟು ಜನರಲ್ಲಿ ಇರಲಿಲ್ಲ , ಬಸ್ ಮತ್ತೆ ಒಬ್ಬರೇ ಓಡಾಡಿದರೆ ಲಾರಿಗಳ ಅವಲಂಬನೆ ಜಾಸ್ತಿ ಇತ್ತು . ಲಾರಿಗಳ ಅಪಘಾತ ತುಂಬಾ ಆಗುತ್ತಿದ್ದರಿಂದ ಅದನ್ನು ಕೈಲಾಸ್ ಗಾಡಿ ಎಂದು ನಾಮಕರಣ ಮಾಡಿದ್ದರು ,ಆದರೂ ಜನ ಚಾಲಕನಿಗೆ ಪುಡಿಗಾಸು ಕೊಟ್ಟು ಅದರಲ್ಲೇ ಪ್ರಯಾಣಿಸುತ್ತಿದ್ದರು .
                ರಾಣಿಬೆನ್ನೂರು ಬೆಂಗಳೂರು ಮತ್ತು ಪುಣೆ ಹೆದ್ದಾರಿಯಲ್ಲಿ ಬರುವ ನಗರ , ೯೦ರ ದಶಕದಲ್ಲಿ ರಾಷ್ಟೀಯ ಹೆದ್ದಾರಿ ಚಿಕ್ಕದಾಗಿದ್ದ ಕಾಲ , ನಗರದೊಳಗೆ ಹೆದ್ದಾರಿ ಹಾದು ಹೋಗುತ್ತಿದ್ದರಿಂದ ಅಪಘಾತಗಳು ಆತ್ಮಹತ್ಯಗಳ ವರದಿಗಳು ಪ್ರತಿದಿನ ಮಾಮೂಲು ಎಂಬಂತೆ ಆಗಿದ್ದವು . ಆಗ ಪ್ರತಿ ವರದಿಗಳನ್ನೂ ಓದಿದಾದಾಗ ಯಾಕೆ ಈ ರಸ್ತೆಗಳು ಸುಧಾರಿಸುತ್ತಿಲ್ಲ ಹೆದ್ದಾರಿಗಳು ಉತ್ತಮವಾದರೆ ಆರ್ಥಿಕ ಅಭಿರುದ್ಧಿಯು ಆಗುತ್ತದೆಯೇ ಎಂದು ಅಪ್ಪನಿಗೆ ಕೇಳುತ್ತಿದ್ದೆ . 

ಮಂಗಳವಾರ, ಡಿಸೆಂಬರ್ 20, 2016

HATS OFF TO KERALA POLICE--PLEASE SHARE THIS

HATS OFF TO KERALA POLICE--PLEASE SHARE THIS
Dear All ,
This mail is written with regard to service rendered by Bharat Chandran RTO neelakal Shabarimala who demostarted super responsibility as an offiiicer who was deployed near to neelakal area , this incident happened on 18th Dec 2016 , where in we were coming back from Pampa after Lord aiyappa darshan( Shabarimala Dharmashastha) , we as a group traveling in 2 vehicles had issue with one of our vehicle mahindra xylo(9325), which break down near to neelakal and we dint know what to do , suddenly we see a govt bolero vehicle stopping near our vehicle and officer mr Bharath chandra and came for our rescue, he himself pusdhed the vehice to road side and ensured no traffic jam is there for other aiyappa devotees , and within half hour we could see Mahindra service vehicle also reaching the spot .This is called excellence in service by kerala RTO officer .
Once service enginner of mahindra confirmed vehicle needs to towed to pathanthitta , our super RTO just callled towing vehcle and next half hour we got towing vehicle also and he just dint allow any traffic jam in that road and ensured our requirement is also met , same day evening we got our vehicle ready .we being from other city /state the kind of service rendered by RTO officer is great and we are very happy such officer are deployed in such sacred philgrimagee place,,,HATS off RTO dept ..
He is a real asset to Kerala RTO dept ... request department to kindly reward his work accorindgly , this kind of experience what we have seen is first time .
All the best --- Once again Thanks a lot Mr Bharat Chandran :) keep rocking ..
Kerala Tourism Sabarimala Ayyappa Sannidhanam Government of KeralaChief Minister of Kerala Manorama News TV Manorama Online

ಶನಿವಾರ, ಡಿಸೆಂಬರ್ 10, 2016

ಎಕಾಂಗಿತನ !!!

ಚಂದಿರನು ಎನಗೆಂದಾ ..ಯಾಕೊ ಈ ಎಕಾಂಗಿತನ..ಮರೆಯಬಾರದೆ ಅವಳನ್ನ..
ನಾನೆಂದೆ ..ಹಾಗದರೆ ನೀ ಮರೆಯುವಿಯಾ ಭುವಿಯನ್ನ..
ಮರೆಯುವದಕ್ಕೆ ಅವಳು ಉಸಿರಲ್ಲಿದ್ದಾಳೆ ಮನಸ್ಸಿನಲ್ಲ..
ಚಂದಿರನೆಂದಾ..ಬಿಡು ಚಿಂತೆಯಾ ಅವಳಿಗೆ ನಾ ಕೊಡುವೆ ನಿನ್ನ ಬಿಂಬವನ..

ಆವರಿಸು !!!

ಸೊತು ಹೊಗುತ್ತಿರುವ ಮನಸ್ಸಿಗೆ ..
ನೀ ವಿಜಯದ ಬಳ್ಳಿ..
ನೀನ್ನ ನೊಟ,ನಗು..ಬಡಿದೆಬ್ಬಿಸುತಿದೆ..ಜಡ್ದು ಹಿಡಿದ ಮನಸನು..
ಕಾಡಬೇಡಾ ಅತಿಯಾಗಿ....ಅವರಿಸಲು ಬಿಡು ನನ್ನನು..
.... ಸchi....

ಮುಂಗುರಳ ಚೆಲುವೆ !!!

ಹಚ್ಚ ಹಸಿರ ಕಾನನದಲ್ಲಿ
ನಿರ್ಜೀವ ಬಂಡೆಯ ಮೇಲೆ
ಮುಂಗುರಳ ಚೆಲುವೆ ಏಕೆ ಕುಳಿತಿರುವೆ....
ನಿನ್ನ ಕಣ್ಣ್ಂಚಿನ ಕನಸುಗಳ ಒಡೆಯನಾಗಲೆ ನಾನು..
ನಿನಗೆ ತಂಪೆರೆಯಲು ಪುಷ್ಪ ವ್ರುಕ್ಷವಾಗಲೆನು..
ನಿನ್ನ ಕಣ್ಣಂಚಿನ ಸನ್ನೆಗೆ ಕಾದಿರುವೆ..
ಗಮನಿಸು ಎನ್ನನು..
...ಸchi...

ಅಪಮೌಲ್ಯ !!!

ನೀನ್ ಎದಿರು ಕುಳಿತಾಗ..
ಮಾತುಗಳು 1000 ರುಪಾಯಿ ಕಾಗದವಾಯಿತು..
ಎಲ್ಲ ಅಪಮೌಲ್ಯ...
ಮಾತನಾಡಲೆ..ಮೌನವಾಗಿರಲೆ...
...sachi...

ತಳಿರು !!

ಎಣ್ಣೆ ಗಂಪಿನ ಕೆನ್ನೆಗೆ..
ಕೆಂದುಟಿಯ ತಳಿರು..
ಗೊಂಬೆಗೆ ಇರುವ ಭಾಗ್ಯವ ನೆನೆದು..
ಕಿಚ್ಚಾಯಿತು ಒಡಲು..