ಗುರುವಾರ, ಆಗಸ್ಟ್ 18, 2011

ನಿನ್ನ ದಾರಿಯಲಿ

ಪ್ರೀತಿಯ ಅಣ್ಣಾ,
ಯುವಕರೇ ನಾಚುವಂತೆ ಇರುವ ನಿಮ್ಮಉತ್ಸಾಹ ಕಂಡು ಬೆರಗಾಗಿದ್ದೇನೆ ..
ನನ್ನ ಸಮಯ ಉಳಿಸಲು ೧೦೦ ೨೦೦ ಕೊಟ್ಟು ಕೆಲಸ ಮಾಡಿಸಿ ಕೊಳ್ಳುವ ಅನ್ನೋ ಯೋಚನೆ ಬಿಡುತ್ತಿದೇನೆ .
"ಪೋಲಿಸ್ ಮಾಮನಿಗೆ ೧೦೦ ಕೊಟ್ಟು ಎಸಕ್ಪೆಅದೇ ಮಗ "ಅನ್ನೋರಿಗೆ ಬ್ರಷ್ಟಚಾರದ ಪಾಠ ಕಲಿಸುತ್ತೇನೆ .
ಪಾಸ್ ಪೋರ್ಟ್ ಅನ್ನು ಸರದಿ ಬಂದಾಗ ಪಡಿಯುತ್ತೇನೆ .ತಕ್ಷಣ ಬೇಕೆಂದರೆ ತತ್ಕಾಲ್ ಗೆ ಹೋಗ್ತೆನೆ ..
ಕಷ್ಟ ಪಟ್ಟು ಚಾಲನೆ ಕಲಿತು ಪರವಾನಿಗೆ ಪಡೆಯುತ್ತೇನೆ ...
ಅಣ್ಣಾ ಸಾಮಾನ್ಯ ನಾಗರಿಕನಾಗಿ ನಾನು ಇದನ್ನುಪಾಲಿಸುತ್ತೇನೆ .....ನಿನ್ನ ದಾರಿಯಲ್ಲಿ ನಡಿಯುತ್ತೇನೆ

ಜೈ ಹಿಂದ್ .


ಗುರುವಾರ, ಜೂನ್ 23, 2011

ಆಷಾಡ

ಆಷಾಡ ಮಾಸ ಬಂದಿತವ್ವ್ ...ನನ್ನ ಮಧುರ ಕ್ಷಣಗಳನ್ನ ಕೊಲ್ಲಲಾಕ ..

ಬುಧವಾರ, ಜೂನ್ 15, 2011

ನಮ್ಮ ಆಫಿಸ್ ಎದುರು


  • ಹತ್ತು ನಿಮಿಷದಲ್ಲಿ ಮಾಡಿ ಕೊಡೊ ದೇಸಿ ಬ್ರೆಡ್ .

  • ತರಹವೆರಿ ಹಣ್ಣಿನ ರಸಗಳು .

  • ಎಲ್ಲ ಕಾಯಿಲೆಗೂ ಔಷದಿ ಉಳ್ಳ ಔಷದಿ ಅಂಗಡಿ .

  • ಉತ್ತರ ಭಾರತದ ಸಿಹಿ ಮತ್ತು ಖಾರದ ತಿಂಡಿಗಳು .

  • ಕೇವಲ ಟೀ ಇಂದ ಶುರು ಮಾಡಿ ಈಗ ಎಲ್ಲ ವಸ್ತುಗಳ ರಾಜು ಅಂಗಡಿ .

  • ರಾಜು ಅಂಗಡಿ ಎದುರು ಸೇದಿ ಬಿಸಾಡಿದ ಸಿಗರೆಟ್ ತುಂಡುಗಳು .

  • ದೂರದ ಮರದಲ್ಲಿ ಮೊಳೆ ಹೊಡಿದು ,ಅದಕ್ಕೆ ತಗುಲಿಸಿದ ಬೆಂಕಿ ಕಡ್ಡಿ ...

  • ಮುಖ ನೋಡಿದ ತಕ್ಷಣ ಅವರದೇ ಆದ ಬ್ರಾಂಡ್ ನ ಸಿಗರೆಟ್ ತಗೆದು ಕೊಡೊ ಸಣ್ಣ ವ್ಯಾಪಾರೀ ....

  • ಏನೋ ಮಗ ಇವತ್ತು ಯಾವ ರೂಟು ಎಂದು ಕೇಳೋ ಕ್ಯಾಬ್ ಡ್ರೈವರ್ ಗಳು .....

  • ವಾಟ್ ಡಾ ಮಚ್ಚಾವಿಲ್ ಬಂಕ್ ದಿ ಕ್ಲಾಸ್ ಟುಡೇ ಅನ್ನೋ ಕಾಲೇಜ್ ಹುಡುಗ್ರು ...

  • ನನಗೇನು ಬೇಡ ಕಣೆ ಅಂತ ನುಲಿಯುವ ಕಂಪನಿ ಹುಡಗಿರು ...

  • ಯು ನೋ ವಾಟ್ ಅಂತ ಗಂಭೀರ ವಾಗಿ ಧಂ ಏಳಿಯೋ ವೃತ್ತಿ ಪರರು ....

  • ಚಿಲ್ಲರೆ ದುಡ್ಡು ಸೇರಿಸಿ ಗೋಲ್ ಗಪ್ಪ ತಿಂದು ಚಪ್ಪರಿಸೋ ಶಾಲಾ ಮಕ್ಕಳು .....

  • ಕುಮಾರ್ ಸ್ವಾಮಿ ಗೆ ಕಾಯ್ತಾ ಬೇಜಾರಾಗಿ ಟೀ ಕುಡಿಯೋಕೆ ಬರೋ ಜನರು ....

  • ಮೈಲುದ್ದ ಪಾರ್ಕಿನಲ್ಲಿ ಓಡಾಡೋ ಪ್ರಣಯ ಪಕ್ಷಿಗಳು ....!!!

  • ಕಾಯ್ತಾ ಕಾಯ್ತಾ ಬೇಜಾರಾಗಿ ಆಚೆ ಬರೋ ಕಂಪನಿ ಸೆಕ್ಯೂರಿಟಿ ಗಾರ್ಡ್ ಗಳು ....

ಅಬ್ಬ ಇನ್ನು ಮುಗಿಯದ ಪಟ್ಟಿಗಳು ...............

ಮಂಗಳವಾರ, ಜನವರಿ 25, 2011

ಪದ್ಮಶ್ರಿ ಪ್ರಶಸ್ತಿ

ನಾವು ಯಾವಾಗ್ಲೂ ಹಾಗೆ ತಳಕು ಬಳಕಿಗೆ ಬೀಳುವ ಜನ , ಇವನನ್ನೇ ತಗೊಳ್ಳಿ ಎದುರಾಳಿ ಮೈಯಲ್ಲಿ ನಡುಕ ಹುಟ್ಟಿಸಿ ಸೋಲುವ ಪಂದ್ಯಗಳನ್ನು ಜಯಿಸಿದ್ದಾನೆ , ಯಾರ್ ಜೋತೆನು ಕಿರಿಕ್ ಮಾಡದೆ ಆಟ ಅಡಿದ್ದಾನೆ , ದೇಶಕ್ಕೆ ಅಮೂಲ್ಯ ಕಾಣಿಕೆ ನೀಡಿದ್ದಾನೆ ಆದರೆ ಅವನಿಗೆ ರಂಗು ರಂಗಾಗಿ ಮಿಂಚುವುದು ಗೊತ್ತಿಲ್ಲ ಅದಕ್ಕೆ ನಮಗೆ ಇವನು ಸೆಲೆಬ್ರಿಟಿ ಅಲ್ಲ ..ಪಂದ್ಯ ಗೆದ್ದಾಗ ಅಬ್ಬ ಏನ್ ಆಡಿದ ಅಂತ ಒಂದು ಉದ್ಗಾರ ಅಷ್ಟೇ ..
ಇವನ ಹೆಸರು ಲಕ್ಷ್ಮಣ್ ...ಇವತ್ತು ಅವನಿಗೆ ಪದ್ಮಶ್ರೀ ಕೊಟ್ಟಿದ್ದಾರೆ ...ಕ್ರಿಕೆಟ್ ಗೆ ಇವನ ಕಾಣಿಕೆ ಅಮೂಲ್ಯ ..ತಂಡ ಕಷ್ಟದಲ್ಲಿ ಇದ್ದಾಗ ಪಾರು ಮಾಡುವುದೇ ಇವನ ಗುರಿ ..
ಭಾರತ ಕ್ರಿಕೆಟ್ ಕಂಡ ಅಪರೂಪದ ಪ್ರತಿಭೆ .....
ಅಭಿನಂದನೆಗಳು ಲಕ್ಷ್ಮಣ್ ..
.