ಗುರುವಾರ, ಜೂನ್ 23, 2011
ಬುಧವಾರ, ಜೂನ್ 15, 2011
ನಮ್ಮ ಆಫಿಸ್ ಎದುರು
- ಹತ್ತು ನಿಮಿಷದಲ್ಲಿ ಮಾಡಿ ಕೊಡೊ ದೇಸಿ ಬ್ರೆಡ್ .
- ತರಹವೆರಿ ಹಣ್ಣಿನ ರಸಗಳು .
- ಎಲ್ಲ ಕಾಯಿಲೆಗೂ ಔಷದಿ ಉಳ್ಳ ಔಷದಿ ಅಂಗಡಿ .
- ಉತ್ತರ ಭಾರತದ ಸಿಹಿ ಮತ್ತು ಖಾರದ ತಿಂಡಿಗಳು .
- ಕೇವಲ ಟೀ ಇಂದ ಶುರು ಮಾಡಿ ಈಗ ಎಲ್ಲ ವಸ್ತುಗಳ ರಾಜು ಅಂಗಡಿ .
- ರಾಜು ಅಂಗಡಿ ಎದುರು ಸೇದಿ ಬಿಸಾಡಿದ ಸಿಗರೆಟ್ ತುಂಡುಗಳು .
- ದೂರದ ಮರದಲ್ಲಿ ಮೊಳೆ ಹೊಡಿದು ,ಅದಕ್ಕೆ ತಗುಲಿಸಿದ ಬೆಂಕಿ ಕಡ್ಡಿ ...
- ಮುಖ ನೋಡಿದ ತಕ್ಷಣ ಅವರದೇ ಆದ ಬ್ರಾಂಡ್ ನ ಸಿಗರೆಟ್ ತಗೆದು ಕೊಡೊ ಸಣ್ಣ ವ್ಯಾಪಾರೀ ....
- ಏನೋ ಮಗ ಇವತ್ತು ಯಾವ ರೂಟು ಎಂದು ಕೇಳೋ ಕ್ಯಾಬ್ ಡ್ರೈವರ್ ಗಳು .....
- ವಾಟ್ ಡಾ ಮಚ್ಚಾವಿಲ್ ಬಂಕ್ ದಿ ಕ್ಲಾಸ್ ಟುಡೇ ಅನ್ನೋ ಕಾಲೇಜ್ ಹುಡುಗ್ರು ...
- ನನಗೇನು ಬೇಡ ಕಣೆ ಅಂತ ನುಲಿಯುವ ಕಂಪನಿ ಹುಡಗಿರು ...
- ಯು ನೋ ವಾಟ್ ಅಂತ ಗಂಭೀರ ವಾಗಿ ಧಂ ಏಳಿಯೋ ವೃತ್ತಿ ಪರರು ....
- ಚಿಲ್ಲರೆ ದುಡ್ಡು ಸೇರಿಸಿ ಗೋಲ್ ಗಪ್ಪ ತಿಂದು ಚಪ್ಪರಿಸೋ ಶಾಲಾ ಮಕ್ಕಳು .....
- ಕುಮಾರ್ ಸ್ವಾಮಿ ಗೆ ಕಾಯ್ತಾ ಬೇಜಾರಾಗಿ ಟೀ ಕುಡಿಯೋಕೆ ಬರೋ ಜನರು ....
- ಮೈಲುದ್ದ ಪಾರ್ಕಿನಲ್ಲಿ ಓಡಾಡೋ ಪ್ರಣಯ ಪಕ್ಷಿಗಳು ....!!!
- ಕಾಯ್ತಾ ಕಾಯ್ತಾ ಬೇಜಾರಾಗಿ ಆಚೆ ಬರೋ ಕಂಪನಿ ಸೆಕ್ಯೂರಿಟಿ ಗಾರ್ಡ್ ಗಳು ....
ಅಬ್ಬ ಇನ್ನು ಮುಗಿಯದ ಪಟ್ಟಿಗಳು ...............
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)