ಪ್ರೀತಿಯ ಅಣ್ಣಾ,
ಯುವಕರೇ ನಾಚುವಂತೆ ಇರುವ ನಿಮ್ಮಉತ್ಸಾಹ ಕಂಡು ಬೆರಗಾಗಿದ್ದೇನೆ ..
ನನ್ನ ಸಮಯ ಉಳಿಸಲು ೧೦೦ ೨೦೦ ಕೊಟ್ಟು ಕೆಲಸ ಮಾಡಿಸಿ ಕೊಳ್ಳುವ ಅನ್ನೋ ಯೋಚನೆ ಬಿಡುತ್ತಿದೇನೆ .
"ಪೋಲಿಸ್ ಮಾಮನಿಗೆ ೧೦೦ ಕೊಟ್ಟು ಎಸಕ್ಪೆಅದೇ ಮಗ "ಅನ್ನೋರಿಗೆ ಬ್ರಷ್ಟಚಾರದ ಪಾಠ ಕಲಿಸುತ್ತೇನೆ .
ಪಾಸ್ ಪೋರ್ಟ್ ಅನ್ನು ಸರದಿ ಬಂದಾಗ ಪಡಿಯುತ್ತೇನೆ .ತಕ್ಷಣ ಬೇಕೆಂದರೆ ತತ್ಕಾಲ್ ಗೆ ಹೋಗ್ತೆನೆ ..
ಕಷ್ಟ ಪಟ್ಟು ಚಾಲನೆ ಕಲಿತು ಪರವಾನಿಗೆ ಪಡೆಯುತ್ತೇನೆ ...
ಅಣ್ಣಾ ಸಾಮಾನ್ಯ ನಾಗರಿಕನಾಗಿ ನಾನು ಇದನ್ನುಪಾಲಿಸುತ್ತೇನೆ .....ನಿನ್ನ ದಾರಿಯಲ್ಲಿ ನಡಿಯುತ್ತೇನೆ
ಜೈ ಹಿಂದ್ .