ಸೋಮವಾರ, ಏಪ್ರಿಲ್ 26, 2010

ಕುಡಿತ ಕಾಡದಿರಲಿ

ಸ್ನೇಹಿತರೆ ....
ನೆನ್ನೆ ನೋಡಿದ ಈ ಘಟನೆ ನನ್ನನ್ನ ಮೂಕವಾಗಿಸಿತು .ಗಾರೆ ಕೆಲಸದವನ್ನೊಬ್ಬ ಕುಡಿದ ಅಮಲಿನಲ್ಲಿ ಅವನ ಹೆಂಡತಿ ಯನ್ನ ಮನಸೋ ಇಚ್ಚೆ ಥಳಿಸುವದನ್ನ್ ನೋಡಿದೆ . ಅ ತಾಯಿಯ ಮೂರು ಕಂದಮ್ಮ ಗಳು ಅವನ ಅಪ್ಪನಿಗೆ ಅಡ್ಡ ಬರುತ್ತಿದ್ದರು .
ಕುಡಿತ ನಮ್ಮ ಹವ್ಯಾಸ, ಅದು ಮಿತಿಯಲ್ಲಿರಲಿ ...ನಮ್ಮನ್ನೇ ನಂಬಿದ ಮಡದಿಯ ಬಾಳು ಹಾಳಾಗುವುದು ಬೇಡ ..ಇಂತ ಘಟನೆಗಳು ಅ ಮಕ್ಕಳ ಮೇಲೆ ಗಹನವಾದ ಪ್ರಭಾವ ಬೀರಿ ಅವರ ಬಾಲ್ಯವನ್ನೇ ಹಾಳು ಮಾಡುತ್ತವೆ .

ಗಂಡ ಹೆಂಡಿರ ಜಗಳ ಮಕ್ಕಳು ಮಲಗಿದ ಮೇಲಾಗಲಿ ...

ಗುರುವಾರ, ಏಪ್ರಿಲ್ 15, 2010

ಕಾಡುವ ಮಹಲು



ಹೀಗೊಂದು ಗಳಿಘೆ ಅಂದು ದಿಲ್ಲಿಗೆ ಹಾರುತ್ತೇನೆ ಅಂದುಕೊಂಡಿರಲಿಲ್ಲ ,ಕೆಲವೇ ದಿನದ ಹಿಂದೆ ಅಂದುಕೊಂಡಿದ್ದು ಕೈಗೂಡಿತ್ತು .ಅಂದು ಶುಕ್ರವಾರ ಆದಿತ್ಯ ನಾಳೆ ನಿನಗೊಂದು ಉಡುಗೊರೆ ಕಾದಿದೆ ೮ ಗಂಟೆಗೆ ಸಿಗು ಅಂತ ಹೇಳಿದ್ದ .ಅವನ ಆತಿಥ್ಯ ,ಅಕ್ಕರೆ ನನಗೆ ಮತ್ತೆ ಬರದ ಹಗೆ ಮಾಡಿತ್ತು .ಸರಿಯಾಗಿ ೮ ಗಂಟೆಗೆ ನಾನು ನೊಯಿಡಾ ಗೆ ಮೆಟ್ರೋ ದಲ್ಲಿ ಬಂದಿಳಿದೆ . ಅಲ್ಲಿಂದ ಹೋರಾಟ ಪ್ರಯಾಣ ೨ ಗಂಟೆ ಯಾದರು ಮುಗಿಯಲಿಲ್ಲ .ನನ್ನ ಅನುಮಾನ ಬಲವಾಗುತ್ತಾ ಹೋಯಿತು ಹಾಗೆ ಅದು ನಿಜನು ಆಯಿತು .ಅವನ ಕಾರು ಆಗ್ರಾ ಪಟ್ಟಣದ ಒಳಗೆ ಪ್ರವೇಶ ಮಾಡಿತ್ತು . ಅಬ್ಬ ೩ ಕಿಮಿ ದೂರದಿಂದಲೂ ಅದೇನು ಮನಮೋಹಕ ದೃಶ್ಯ ...ನಾನು ಒಂದು ಕ್ಷಣ ಮೂಕನಾದೆ .(ನನ್ನ ಭಾವಿ ಪತ್ನಿಯನ್ನು ಬಿಟ್ಟು ಬಂದೆನ್ನಲ್ಲ ಎಂದು ಮಮ್ಮಲ ಮರುಗಿದೆ !!) .


ಅ ಮಹಲನ್ನು ನೋಡುವುದೇ ಒಂದು ಕಣ್ಣಿಗೆ ಹಬ್ಬ ...ಅ ಪ್ರೀತಿಯ ಕಾಣಿಕೆಯನ್ನು ಪಡೆದ ಮುಮ್ತಾಜ ನಿಜಕ್ಕೂ ಧನ್ಯಳು . ಅ ಮಹಲನ್ನು ಎಷ್ಟು ನೋಡಿದರು ಮನದನಿಯಲ್ಲಿಲ್ಲ .ಗಂಟೆ ೩ ಆದರು ಹೊಟ್ಟೆ ಹಠ ಮಾಡಲಿಲ್ಲ .ಮನಸು ಪಟ್ಟ ಖುಷಿಗೆ ಅದಕ್ಕೆ ಹಸಿವೆ ಮರೆತು ಹೋಗಿತ್ತು .


ಆದಿತ್ಯ ಅಲ್ಲಿಯ ಎಲ್ಲ ಜಾಗಗಳಲ್ಲೂ ನಿಲ್ಲಿಸಿ ನನ್ನ ಚಿತ್ರಗಳನು ಸೆರೆ ಹಿಡಿದ .ಅವನ ಅ ಕಾಣಿಕೆ ಅಮೂಲ್ಯ ವಾಗಿತ್ತು .ನನ್ನ ಆನಂದವನ್ನು ನೋಡಿ ಅವನಿಗೆ ತುಂಬಾ ಸಂತೋಷ ಆಯಿತು .


ನನ್ನವಳಿಗೆ ಮಾತು ಕೊಟ್ಟಿದ್ದೇನೆ ...ಮುಂದಿನ ಭೇಟಿ ಅವಳೊಡನೆ ಮಾತ್ರ ...ಹಾಗೆ ಅ ಅಮರ ಪ್ರೇಮಿಗೆ ನನ್ನ ಪ್ರೇಮಿಯ ಜೊತೆ ಒಂದು ನಮನದೊಡನೆ.


ಕೊನೆ ಉಸಿರು

ಸಾಯದಿರು ದೇಹವೇ ನಿನ್ನ ಸ್ನೇಹಿತರ ಕಾಣದೆ
ನೆನಪಿರಲಿ ನೀನು ಬದುಕ್ಕಿದ್ದೇ ಅವರ ಪ್ರೀತಿಯ ಸಿಂಚನದಿಂದ