ಗುರುವಾರ, ಏಪ್ರಿಲ್ 15, 2010

ಕಾಡುವ ಮಹಲು



ಹೀಗೊಂದು ಗಳಿಘೆ ಅಂದು ದಿಲ್ಲಿಗೆ ಹಾರುತ್ತೇನೆ ಅಂದುಕೊಂಡಿರಲಿಲ್ಲ ,ಕೆಲವೇ ದಿನದ ಹಿಂದೆ ಅಂದುಕೊಂಡಿದ್ದು ಕೈಗೂಡಿತ್ತು .ಅಂದು ಶುಕ್ರವಾರ ಆದಿತ್ಯ ನಾಳೆ ನಿನಗೊಂದು ಉಡುಗೊರೆ ಕಾದಿದೆ ೮ ಗಂಟೆಗೆ ಸಿಗು ಅಂತ ಹೇಳಿದ್ದ .ಅವನ ಆತಿಥ್ಯ ,ಅಕ್ಕರೆ ನನಗೆ ಮತ್ತೆ ಬರದ ಹಗೆ ಮಾಡಿತ್ತು .ಸರಿಯಾಗಿ ೮ ಗಂಟೆಗೆ ನಾನು ನೊಯಿಡಾ ಗೆ ಮೆಟ್ರೋ ದಲ್ಲಿ ಬಂದಿಳಿದೆ . ಅಲ್ಲಿಂದ ಹೋರಾಟ ಪ್ರಯಾಣ ೨ ಗಂಟೆ ಯಾದರು ಮುಗಿಯಲಿಲ್ಲ .ನನ್ನ ಅನುಮಾನ ಬಲವಾಗುತ್ತಾ ಹೋಯಿತು ಹಾಗೆ ಅದು ನಿಜನು ಆಯಿತು .ಅವನ ಕಾರು ಆಗ್ರಾ ಪಟ್ಟಣದ ಒಳಗೆ ಪ್ರವೇಶ ಮಾಡಿತ್ತು . ಅಬ್ಬ ೩ ಕಿಮಿ ದೂರದಿಂದಲೂ ಅದೇನು ಮನಮೋಹಕ ದೃಶ್ಯ ...ನಾನು ಒಂದು ಕ್ಷಣ ಮೂಕನಾದೆ .(ನನ್ನ ಭಾವಿ ಪತ್ನಿಯನ್ನು ಬಿಟ್ಟು ಬಂದೆನ್ನಲ್ಲ ಎಂದು ಮಮ್ಮಲ ಮರುಗಿದೆ !!) .


ಅ ಮಹಲನ್ನು ನೋಡುವುದೇ ಒಂದು ಕಣ್ಣಿಗೆ ಹಬ್ಬ ...ಅ ಪ್ರೀತಿಯ ಕಾಣಿಕೆಯನ್ನು ಪಡೆದ ಮುಮ್ತಾಜ ನಿಜಕ್ಕೂ ಧನ್ಯಳು . ಅ ಮಹಲನ್ನು ಎಷ್ಟು ನೋಡಿದರು ಮನದನಿಯಲ್ಲಿಲ್ಲ .ಗಂಟೆ ೩ ಆದರು ಹೊಟ್ಟೆ ಹಠ ಮಾಡಲಿಲ್ಲ .ಮನಸು ಪಟ್ಟ ಖುಷಿಗೆ ಅದಕ್ಕೆ ಹಸಿವೆ ಮರೆತು ಹೋಗಿತ್ತು .


ಆದಿತ್ಯ ಅಲ್ಲಿಯ ಎಲ್ಲ ಜಾಗಗಳಲ್ಲೂ ನಿಲ್ಲಿಸಿ ನನ್ನ ಚಿತ್ರಗಳನು ಸೆರೆ ಹಿಡಿದ .ಅವನ ಅ ಕಾಣಿಕೆ ಅಮೂಲ್ಯ ವಾಗಿತ್ತು .ನನ್ನ ಆನಂದವನ್ನು ನೋಡಿ ಅವನಿಗೆ ತುಂಬಾ ಸಂತೋಷ ಆಯಿತು .


ನನ್ನವಳಿಗೆ ಮಾತು ಕೊಟ್ಟಿದ್ದೇನೆ ...ಮುಂದಿನ ಭೇಟಿ ಅವಳೊಡನೆ ಮಾತ್ರ ...ಹಾಗೆ ಅ ಅಮರ ಪ್ರೇಮಿಗೆ ನನ್ನ ಪ್ರೇಮಿಯ ಜೊತೆ ಒಂದು ನಮನದೊಡನೆ.


3 ಕಾಮೆಂಟ್‌ಗಳು: