ಶನಿವಾರ, ನವೆಂಬರ್ 6, 2010

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು .
ಈ ಹಬ್ಬ ಬಂದಾಗ ,ನನ್ನ ಮನಸು ಇಪ್ಪತ್ತು ವರಷ್ ಹಿಂದೆ ಓಡುತ್ತದೆ !! ನಮ್ಮ ದೊಡ್ಡಮ್ಮ ಪಕ್ಕದ ಗ್ರಾಮದಲ್ಲಿ ಇದ್ದುದರಿಂದ ನಾವು ಹಬ್ಬಕ್ಕೆ ಅಲ್ಲಿ ಓಡುತ್ತಿದೆವು . ನಮ್ಮ ದೊಡ್ಡಮ್ಮ ನರಕ ಚತುರ್ದಶಿಯ ಹಿಂದಿನ ದಿನ ನೀರಿನ ಒಲೆಗೆ " ಗಂಗಾ ಭಾಗೀರತಿ " ಎಂದು ಬರೆದು ,ಅದಕ್ಕೆ ಕೆಂಪು ಬಣ್ಣದ ಒಪ್ಪ ಮಾಡುತ್ತಿದರು . ಮರುದಿನ ಬೇಗನೆ ಎಬ್ಬಿಸಿ ನಮಗೆಲ್ಲ ಅಭ್ಯಂಜನ ಸ್ನಾನ !! ಮದ್ಯಾನದ ಊಟ ರಸಗವಳ. ಹಾಗೆ ಕಣ್ಣು ಮುಚ್ಚಿದರೆ ಮಾಯಾ ನಿದ್ರೆ !!
ಮೂರನೇ ದಿನ ಬಲಿ ಪಾಡ್ಯ,ದೊಡ್ಡಮ್ಮ ಅಂಗಳ ದೊಲ್ಲೊಂದು ದಂಟಿನ ಮಂಟಪ ಮಾಡಿ ,ಇದು ಪಾಂಡವರ ಮಂಟಪ ಎನ್ನುತಿದ್ದರು , ನಾನು ಮತ್ತೆ ಅಣ್ಣ ಸೇರಿ ಸೆಗಣಿಯ ಹಟ್ಟಿಯನ್ನು ಮನೆಯ ಎಲ್ಲ ಬಾಗಿಲಿಗಳಿಗು ಇಡುತ್ತ ಬರುತ್ತಿದೆವು . ಅದಕ್ಕೆ ಚೆಂಡು ಹೂವು ಮತ್ತೆ ದರ್ಬೆಯ ಅಲಂಕಾರ ಬೇರೆ . ಆಹಾ ಮನೆಯಲ್ಲ ಅದೇನೋ ಸಂಬ್ರಮ . ರಾತ್ರಿಯದ ಮೇಲೆ ಊರೆಲ್ಲ ಪಂಜಿನ ಸಂಬ್ರಮ . ಈಗಿನ ಪಟಾಕಿ ಭರಾಟೆ ಆಗ ಇರಲ್ಲಿಲ್ಲ .ಒಟ್ಟಿನಲ್ಲಿ ಆ ಊರಿನಲ್ಲಿ ಮೂರು ದಿನ ಕಳೆದದ್ದು ಗೊತ್ತೇ ಆಗುತ್ತಿರಲಿಲ್ಲ .
ಈಗ ದೊಡ್ಡಮ್ಮ ಪಟ್ಟಣ ಸೇರಿದ್ದಾರೆ ...ಆ ಉತ್ಸಾಹ ಈಗ ಅಲ್ಲಿ ಇಲ್ಲ ...ಗತ ದಿನಗಳನ್ನ ನೆನೆದರೆ ಕಣ್ಣು ಮಂಜಾಗುತ್ತದೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ