ಶನಿವಾರ, ನವೆಂಬರ್ 6, 2010
ಈ ಹಬ್ಬ ಬಂದಾಗ ,ನನ್ನ ಮನಸು ಇಪ್ಪತ್ತು ವರಷ್ ಹಿಂದೆ ಓಡುತ್ತದೆ !! ನಮ್ಮ ದೊಡ್ಡಮ್ಮ ಪಕ್ಕದ ಗ್ರಾಮದಲ್ಲಿ ಇದ್ದುದರಿಂದ ನಾವು ಹಬ್ಬಕ್ಕೆ ಅಲ್ಲಿ ಓಡುತ್ತಿದೆವು . ನಮ್ಮ ದೊಡ್ಡಮ್ಮ ನರಕ ಚತುರ್ದಶಿಯ ಹಿಂದಿನ ದಿನ ನೀರಿನ ಒಲೆಗೆ " ಗಂಗಾ ಭಾಗೀರತಿ " ಎಂದು ಬರೆದು ,ಅದಕ್ಕೆ ಕೆಂಪು ಬಣ್ಣದ ಒಪ್ಪ ಮಾಡುತ್ತಿದರು . ಮರುದಿನ ಬೇಗನೆ ಎಬ್ಬಿಸಿ ನಮಗೆಲ್ಲ ಅಭ್ಯಂಜನ ಸ್ನಾನ !! ಮದ್ಯಾನದ ಊಟ ರಸಗವಳ. ಹಾಗೆ ಕಣ್ಣು ಮುಚ್ಚಿದರೆ ಮಾಯಾ ನಿದ್ರೆ !!
ಮೂರನೇ ದಿನ ಬಲಿ ಪಾಡ್ಯ,ದೊಡ್ಡಮ್ಮ ಅಂಗಳ ದೊಲ್ಲೊಂದು ದಂಟಿನ ಮಂಟಪ ಮಾಡಿ ,ಇದು ಪಾಂಡವರ ಮಂಟಪ ಎನ್ನುತಿದ್ದರು , ನಾನು ಮತ್ತೆ ಅಣ್ಣ ಸೇರಿ ಸೆಗಣಿಯ ಹಟ್ಟಿಯನ್ನು ಮನೆಯ ಎಲ್ಲ ಬಾಗಿಲಿಗಳಿಗು ಇಡುತ್ತ ಬರುತ್ತಿದೆವು . ಅದಕ್ಕೆ ಚೆಂಡು ಹೂವು ಮತ್ತೆ ದರ್ಬೆಯ ಅಲಂಕಾರ ಬೇರೆ . ಆಹಾ ಮನೆಯಲ್ಲ ಅದೇನೋ ಸಂಬ್ರಮ . ರಾತ್ರಿಯದ ಮೇಲೆ ಊರೆಲ್ಲ ಪಂಜಿನ ಸಂಬ್ರಮ . ಈಗಿನ ಪಟಾಕಿ ಭರಾಟೆ ಆಗ ಇರಲ್ಲಿಲ್ಲ .ಒಟ್ಟಿನಲ್ಲಿ ಆ ಊರಿನಲ್ಲಿ ಮೂರು ದಿನ ಕಳೆದದ್ದು ಗೊತ್ತೇ ಆಗುತ್ತಿರಲಿಲ್ಲ .
ಈಗ ದೊಡ್ಡಮ್ಮ ಪಟ್ಟಣ ಸೇರಿದ್ದಾರೆ ...ಆ ಉತ್ಸಾಹ ಈಗ ಅಲ್ಲಿ ಇಲ್ಲ ...ಗತ ದಿನಗಳನ್ನ ನೆನೆದರೆ ಕಣ್ಣು ಮಂಜಾಗುತ್ತದೆ .
ಮಂಗಳವಾರ, ಜೂನ್ 29, 2010
ಗುರುವಾರ, ಜೂನ್ 24, 2010
ಸೋಮವಾರ, ಏಪ್ರಿಲ್ 26, 2010
ಕುಡಿತ ಕಾಡದಿರಲಿ
ನೆನ್ನೆ ನೋಡಿದ ಈ ಘಟನೆ ನನ್ನನ್ನ ಮೂಕವಾಗಿಸಿತು .ಗಾರೆ ಕೆಲಸದವನ್ನೊಬ್ಬ ಕುಡಿದ ಅಮಲಿನಲ್ಲಿ ಅವನ ಹೆಂಡತಿ ಯನ್ನ ಮನಸೋ ಇಚ್ಚೆ ಥಳಿಸುವದನ್ನ್ ನೋಡಿದೆ . ಅ ತಾಯಿಯ ಮೂರು ಕಂದಮ್ಮ ಗಳು ಅವನ ಅಪ್ಪನಿಗೆ ಅಡ್ಡ ಬರುತ್ತಿದ್ದರು .
ಕುಡಿತ ನಮ್ಮ ಹವ್ಯಾಸ, ಅದು ಮಿತಿಯಲ್ಲಿರಲಿ ...ನಮ್ಮನ್ನೇ ನಂಬಿದ ಮಡದಿಯ ಬಾಳು ಹಾಳಾಗುವುದು ಬೇಡ ..ಇಂತ ಘಟನೆಗಳು ಅ ಮಕ್ಕಳ ಮೇಲೆ ಗಹನವಾದ ಪ್ರಭಾವ ಬೀರಿ ಅವರ ಬಾಲ್ಯವನ್ನೇ ಹಾಳು ಮಾಡುತ್ತವೆ .
ಗಂಡ ಹೆಂಡಿರ ಜಗಳ ಮಕ್ಕಳು ಮಲಗಿದ ಮೇಲಾಗಲಿ ...
ಗುರುವಾರ, ಏಪ್ರಿಲ್ 15, 2010
ಕಾಡುವ ಮಹಲು
ಹೀಗೊಂದು ಗಳಿಘೆ ಅಂದು ದಿಲ್ಲಿಗೆ ಹಾರುತ್ತೇನೆ ಅಂದುಕೊಂಡಿರಲಿಲ್ಲ ,ಕೆಲವೇ ದಿನದ ಹಿಂದೆ ಅಂದುಕೊಂಡಿದ್ದು ಕೈಗೂಡಿತ್ತು .ಅಂದು ಶುಕ್ರವಾರ ಆದಿತ್ಯ ನಾಳೆ ನಿನಗೊಂದು ಉಡುಗೊರೆ ಕಾದಿದೆ ೮ ಗಂಟೆಗೆ ಸಿಗು ಅಂತ ಹೇಳಿದ್ದ .ಅವನ ಆತಿಥ್ಯ ,ಅಕ್ಕರೆ ನನಗೆ ಮತ್ತೆ ಬರದ ಹಗೆ ಮಾಡಿತ್ತು .ಸರಿಯಾಗಿ ೮ ಗಂಟೆಗೆ ನಾನು ನೊಯಿಡಾ ಗೆ ಮೆಟ್ರೋ ದಲ್ಲಿ ಬಂದಿಳಿದೆ . ಅಲ್ಲಿಂದ ಹೋರಾಟ ಪ್ರಯಾಣ ೨ ಗಂಟೆ ಯಾದರು ಮುಗಿಯಲಿಲ್ಲ .ನನ್ನ ಅನುಮಾನ ಬಲವಾಗುತ್ತಾ ಹೋಯಿತು ಹಾಗೆ ಅದು ನಿಜನು ಆಯಿತು .ಅವನ ಕಾರು ಆಗ್ರಾ ಪಟ್ಟಣದ ಒಳಗೆ ಪ್ರವೇಶ ಮಾಡಿತ್ತು . ಅಬ್ಬ ೩ ಕಿಮಿ ದೂರದಿಂದಲೂ ಅದೇನು ಮನಮೋಹಕ ದೃಶ್ಯ ...ನಾನು ಒಂದು ಕ್ಷಣ ಮೂಕನಾದೆ .(ನನ್ನ ಭಾವಿ ಪತ್ನಿಯನ್ನು ಬಿಟ್ಟು ಬಂದೆನ್ನಲ್ಲ ಎಂದು ಮಮ್ಮಲ ಮರುಗಿದೆ !!) .
ಅ ಮಹಲನ್ನು ನೋಡುವುದೇ ಒಂದು ಕಣ್ಣಿಗೆ ಹಬ್ಬ ...ಅ ಪ್ರೀತಿಯ ಕಾಣಿಕೆಯನ್ನು ಪಡೆದ ಮುಮ್ತಾಜ ನಿಜಕ್ಕೂ ಧನ್ಯಳು . ಅ ಮಹಲನ್ನು ಎಷ್ಟು ನೋಡಿದರು ಮನದನಿಯಲ್ಲಿಲ್ಲ .ಗಂಟೆ ೩ ಆದರು ಹೊಟ್ಟೆ ಹಠ ಮಾಡಲಿಲ್ಲ .ಮನಸು ಪಟ್ಟ ಖುಷಿಗೆ ಅದಕ್ಕೆ ಹಸಿವೆ ಮರೆತು ಹೋಗಿತ್ತು .
ಆದಿತ್ಯ ಅಲ್ಲಿಯ ಎಲ್ಲ ಜಾಗಗಳಲ್ಲೂ ನಿಲ್ಲಿಸಿ ನನ್ನ ಚಿತ್ರಗಳನು ಸೆರೆ ಹಿಡಿದ .ಅವನ ಅ ಕಾಣಿಕೆ ಅಮೂಲ್ಯ ವಾಗಿತ್ತು .ನನ್ನ ಆನಂದವನ್ನು ನೋಡಿ ಅವನಿಗೆ ತುಂಬಾ ಸಂತೋಷ ಆಯಿತು .
ನನ್ನವಳಿಗೆ ಮಾತು ಕೊಟ್ಟಿದ್ದೇನೆ ...ಮುಂದಿನ ಭೇಟಿ ಅವಳೊಡನೆ ಮಾತ್ರ ...ಹಾಗೆ ಅ ಅಮರ ಪ್ರೇಮಿಗೆ ನನ್ನ ಪ್ರೇಮಿಯ ಜೊತೆ ಒಂದು ನಮನದೊಡನೆ.
ಶನಿವಾರ, ಜನವರಿ 23, 2010
ಸಖಿ
ಆದರೆ ನಿನ್ನ ಪ್ರೀತಿಯ ಸಿಂಚನ, ಬೆಚ್ಚನೆಯ ಅಪ್ಪುಗೆ ,ಅ ಸಿಹಿ ಮುತ್ತು ..ಸುಮಧುರ ನೆನಪುಗಳು
ಕೊಡುತಿದೆ ಈ ಹೃದಯಕ್ಕೆ ಮದ್ದು ...
ಸಖಿ ಮರೆಯದಿರು ನನ್ನ ...ನಿಲ್ಲಿಸದಿರು ಎನ್ನ ಹೃದಯದ ಬಡಿತವನ್ನ ..
ಬುಧವಾರ, ಜನವರಿ 20, 2010
ಚೋರ
ಅಲ್ಲಿರುವದು ಜೀವನ ..ಕನಸಲ್ಲ
ನಿನ್ನ ಕನಸುಗಳಿಗೆ ಅವನ ಜೊತೆ ಈರಲಿ ...
ಏಕೆಂದರೆ ಅವನು ನಿನ್ನ ಕನಸು ಹೊತ್ತ ಹೃದಯ ಕದ್ದಿದ್ದಾನೆ...
ಗುರುವಾರ, ಜನವರಿ 14, 2010
ಅವಳು
ಕನ್ನಡಿಯೊಡನೆ ಮಾಯವಾದಳು ಅವಳು ....
ಕಾಡುವ ಅವಳ ಬಿಂಬದೊಡನೆ....
ಶನಿವಾರ, ಜನವರಿ 2, 2010
Sachi
ಎಲ್ಲರಿಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು !!
ಚುಮು ಚುಮು ಚಳಿಯಲ್ಲಿ ಕಂಡ ಕನಸುಗಳು !!
ಹೊಳೆಯುವ ಕಣ್ಣಿನಲ್ಲಿ ಕಾಡುವ ಬಯಕೆಗಳು !!
ಬೆಚ್ಚನೆ ಹೃದಯದ ಪಿಸುಮಾತುಗಳು !!
ಈ ವರ್ಷ ನಿಮ್ಮ ಎಲ್ಲ ಬಯಕೆಗಳು ನನಸಾಗಲಿ
ನಿಮ್ಮ
ಸಚ್ಚಿ
Vishnuvardhan
I was speachless for whole day on 30th Dec . Still that smile of the lion is coming infront of My eyes . I dont want to buy a Fact of his Death . He is still With us....Ever ....for Ever